ಕಾಡುವ ಹನಿಗಳು · ನನ್ನ ಬದುಕಿನ ಸಂಭ್ರಮ ಮತ್ತು ನಿಮ್ಮ ಸಾವಿನ ಹಂಬಲ · ನೆನಪಿನ ಹನಿ

ನನ್ನ ಬದುಕಿನ ಸಂಭ್ರಮ ಮತ್ತು ನಿಮ್ಮ ಸಾವಿನ ಹಂಬಲ ..

ನೀನು ನನ್ನ ಬದುಕು ಎಂದರು, ಆಮೇಲೆ ಸಾವಿನ ದಾರಿಯನ್ನೂ ಕಂಡುಕೊಂಡರು. ನಾ ಬದುಕಾಗಿದ್ದರೆ ನಿನ್ನ ಸಾವು ನನ್ನ ಸಾವು(ಅಥವಾ ಕೊಲೆ)ಯಲ್ಲವೇ… ?.
ಸಾವು ಅಂದರೆ ಎಲ್ಲದರ ಅಂತ್ಯ, ಹಾಗಾದರೆ ಎಲ್ಲವೂ ಅಂತ್ಯಗೊಂಡತಲ್ಲವೇ..?(ನಾನೂ, ನನ್ನೊಂದಿಗಿನ ಎಲ್ಲಾ ಕೊಂಡಿಗಳೂ)

೧)
ನಾನು ಹೀಗೇ
ನಿಮ್ಮಗಳ ಸಾವಿನಾ-
ಚೆಗಿನ ಅವಕಾಶದಲ್ಲಿ
ಬಿರಿದು ಘಮಿಸುತ್ತೇನೆ
ನಿನ್ನೆಗಳ ನೆನಪೇ
ಇಲ್ಲದಂತೆ….

೨)
ನನ್ನನ್ನೂ ಮೀರಿದ
ಸಾವಿನ ಹಂಬಲದ
ಜೊತೆ ಮಾತ್ರ ನಿನಗೆ
ಕಾಪಠ್ಯ ರಹಿತ
ಒಲವಿದೆ..

೩)
ಎಷ್ಟು ಮೊಗೆದು
ಕೊಟ್ಟರೇನಂತೆ?
ನಿನ್ನ ಸಾವಿನ ಹಂಬಲವನ್ನು
ಗೆಲ್ಲಲಾಗದ
ಸಾರವಿಲ್ಲದ ಪ್ರೀತಿ ನನ್ನದು…