ಜೊತೆಯಾಗಿ ನೀ ಮತ್ತೆ ಬಾ.. · ಮನಸಿನ ಹಾ(ಪಾ)ಡು

ಜೊತೆಯಾಗಿ ನೀ ಮತ್ತೆ ಬಾ..

ಕಮರಿದ ಕನಸಿಗೆ
ಜೀವ ತುಂಬಬೇಕಿದೆ…
ನನಸಾಗಿ ನೀ ಮತ್ತೆ ಬಾ..
ಕಳೆದು ಹೋದ ದಾರಿಯಲಿ
ಮಗದೊಮ್ಮೆ ನಡೆಯಬೇಕಿದೆ ..
ಜೊತೆಯಾಗಿ ನೀ ಮತ್ತೆ ಬಾ…

ನಿನ್ನ ಬದುಕಿನ ಗೀತೆಗೆ
ಸ್ವರವಾಗಬೇಕು ನಾನು…
ನೀನಿಡುವ ಪ್ರತೀ ಹೆಜ್ಜೆಗೂ
ಗೆಜ್ಜೆಯಾಗಬೇಕು ನಾನು..

ನೀ ನಡೆವ ದಾರಿಯಲಿ
ಬೆಳಕಾಗಬೇಕು ನಾನು..
ನಿನ್ನ ಹಾಲ್ಮೊಗದಲಿ ಮೂಡುವ
ಮಂದಹಾಸವಾಗಬೇಕು ನಾನು ..

ನೀ ಮುನಿದರೆ ಅದ ನೋಡಿ
ಮುನಿಯುವ ಮಗುವಾಗಬೇಕು ನಾನು…
ನೀನೊಲಿದರೆ ಒಲವ ತೋರುವ
ನಲ್ಲನಾಗಬೇಕು ನಾನು…

ನೀ ಎಲ್ಲೇ ಹೋದರು ಪಟ್ಟು ಬಿಡದ
ನೆರಳಾಗಬೇಕು ನಾನು..
ನಿನ್ನ ಜೊತೆಯೇ ಈ ಜಗವ ತೊರೆಯಲು
ನಿನ್ನೆದೆಯ ಬಡಿತವಾಗಬೇಕು ನಾನು..!

ಕಮರಿದ ಕನಸಿಗೆ
ಜೀವ ತುಂಬ ಬೇಕಿದೆ…
ನನಸಾಗಿ ನೀ ಮತ್ತೆ ಬಾ..
ಕಳೆದು ಹೋದ ದಾರಿಯಲಿ
ಮಗದೊಮ್ಮೆ ನಡೆಯಬೇಕಿದೆ ..
ಜೊತೆಯಾಗಿ ನೀ ಮತ್ತೆ ಬಾ…