ಕನ್ನಡವೆಂದರೆ ನನಗೆ

ಕನ್ನಡವೆಂದರೆ ನನಗೆ

kannada

ಕನ್ನಡವೆಂದರೆ ನನಗೆ
ಕಲಿತ ಮೊತ್ತ ಮೊದಲ ಅಕ್ಷರ,
ಉರು ಹೊಡೆದ ಮೊದಲ ಪದ್ಯ
ಹಾಡಿ ನಲಿದ ಮೊದಲ ಹಾಡು
ತೊದಲಿ ಮಾಡಿದ ಮೊದಲ ಭಾಷಣ
ಕಾಪಿ ಹೊಡೆದು ಬರೆದ ಮೊದಲ ಪ್ರಬಂಧ
ಬರೆದು ಅಡಗಿಸಿಟ್ಟ ಮೊದಲ ಕವಿತೆ
ಸುಳ್ಳು ನೆಪ ಬರೆದ ಮೊದಲ ರಜಾರ್ಜಿ
ಅರ್ಧ ಬರೆದ ಮೊದಲ ಕಥೆ…
ಮರಿಯಮ್ ಗೆ ಬರೆದ ಮೊದಲ ಪ್ರೇಮ ಪತ್ರ 🙂

ಕನ್ನಡವೆಂದರೆ ನನಗೆ
ನನ್ನ ಪುತ್ತೂರಿನಿಂದ
ಬೆಂಗಳೂರಿನ ತನಕದ ಹಸಿರು ಹಾದಿ;
ನಡುವೆ ಸಿಗುವ ನೀರ ಝರಿ, ಭೂವಲಯಸಿರಿ!

ಕನ್ನಡವೆಂದರೆ ನನಗೆ
ನಾಲಿಗೆ ಉಲಿಯುವ ಇಂಪು
ಕಿವಿ ನಿಮಿರಿಸುವ ಕಂಪು
ಕಣ್ಣಿಗೆ ಕಡು ಚೆಲುವು ತಂಪು!

ಕನ್ನಡವೆಂದರೆ ನನಗೆ
ಅಪ್ಪಿ ಮುದ್ದಾಡುವ ಗೆಳತಿ;
ನೋವ ಭಾರಕೆ ಗೆಳೆಯನ ಹೆಗಲು
ರಚ್ಚೆ ಹಿಡಿದ ಮಗನಿಗೆ ಅಮ್ಮನ ಲಾಲಿ..

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

_ಹುಸೇನಿ

Leave a comment