ಉಸಿರಾಗಬೇಡ ನೀನು...!

ಉಸಿರಾಗಬೇಡ ನೀನು…!

ಬಯಕೆಗಲೇ  ಇಲ್ಲದ ಜೀವಕ್ಕೆ ಕನಸಾದೆ ನೀನು ,
ಆದರೆ ಕನಸಾಗಬೇಡ..
ಕನಸ್ಸಲ್ಲಿ ಎಲ್ಲವೂ ಬಂದು ಹೋಗುವುದು…

ಮಾತೇ  ಇಲ್ಲದ  ತುಟಿಗಳ ಮೇಲೆ ಮಾತಾದೆ ನೀನು…
ಆದರೆ ಮಾತಾಗಬೇಡ..
ಕೊಟ್ಟ ಮಾತು ತಪ್ಪುವುದು…

ನಗು ಮರೆತ ಮೊಗದಲ್ಲಿ ಮಂದಹಾಸವಾದೆ  ನೀನು…
ಆದರೆ ಮಂದಹಾಸವಾಗಬೇಡ…
ಮಂದಹಾಸದಲ್ಲೂ ಮೋಸವಿರುವುದು…

ಭಾವವೇ ಇಲ್ಲದ ನನಗೆ ಭಾವನೆಯಾದೆ ನೀನು
ಆದರೆ ಭಾವನೆಯಾಗಬೇಡ…
ಭಾವನೆಯೂ ತಾಳಕ್ಕೆ ತಕ್ಕೆ ಕುಣಿಯುವುದು..

ಕತ್ತಲು ತುಂಬಿದ ನನ್ನ ಬಾಳಿನ ಬೆಳಕಾದೆ ನೀನು..
ಆದರೆ ಬೆಳಕಾಗಬೇಡ…
ಸೂರ್ಯನೂ ಸಂಜೆಯಾದಾಗ ಮರೆಯಾಗುವನು…

ಪ್ರೀತಿ ಕಾಣದ ಜೀವಕ್ಕೆ ಒಲವಾದೆ ನೀನು..
ಆದರೆ ಒಲವಾಗಬೇಡ …
ಒಲವು ಕೂಡ ನೋವು ನೀಡುವುದು…

ಹಸಿರಿಲ್ಲದ ನನ್ನ ಬಾಳಿನ ಉಸಿರಾದೆ ನೀನು..
ಆದರೆ ಉಸಿರಾಗಬೇಡ ..
ಉಸಿರು ಕೂಡ ಒಂದು ದಿನ ನಿಲ್ಲುವುದು…