ಇಬ್ಬನಿ ಹಾಯ್ಕು -೨

ಇಬ್ಬನಿ ಹಾಯ್ಕು -೨

ದಾರಿಯಲ್ಲಿ ಹಾವು
ಪೊರೆ ಕಳಚಿದೆ
ನನ್ನ ಮುಖವಾಡ ಕಂಪಿಸಿತು.

*
ಒಡೆದು ಚೂರಾದ
ಕನ್ನಡಿ
ಯಾವುದರಲ್ಲಿ ನಾನು ?

*
ಹಗಲಲ್ಲಿ ಸೂರ್ಯ
ರಾತ್ರಿ ಚಂದ್ರ
ಇಬ್ಬರನ್ನು ಹೊರುವ ಒಂದೇ ಬಾವಿ.

*
ನೀರಲ್ಲಿ ನೆನೆದ ಗುಬ್ಬಚ್ಚಿ
ಗರಿ ಬಿಚ್ಚಿತು
ಮರಳಿನಲ್ಲಿ ಮಳೆಹನಿ

*
ಅಂಟಿದ್ದನ್ನು
ಎಷ್ಟೇ ಕೈ ತೊಳೆದರೂ
ಅಮ್ಮನ ಪರಿಮಳ ಉಳಿಯಿತು.

( ಕೆಲವೊಂದು ಪ್ರೇರಿತ ಮತ್ತು ಅನುವಾದಿತ )
Leave a Comment