ಹುಸೇನಿ_ಪದ್ಯಗಳು

ಸಂತ


ನೀರು ಕಾಣದ ನರಪೇತಲ ಶರೀರ,
ಮುಗುಳ್ನಕ್ಕು ಶತಮಾನಗಳು
ಕಳೆದಿರಬಹುದು,
ಸೂರ್ಯೋದಯಕ್ಕಿಂತಲೇ
ಮುಂಚೆ ಅವನು ಖಾಲಿ ತೂತು ಜೋಳಿಗೆಯೇರಿಸಿ
ಹೊರಡುತ್ತಾನೆ..
ಜಗತ್ತಿನ ಪಾಲಿಗವನು
ಆಯ್ದು ತಿನ್ನುವ ಕೊಳಕ;
ನನ್ನ ಪಾಲಿಗೆ
ಅಪರಿಚಿತ ಸಂತ…

೨)

ಅಲ್ಲಿ ಭಾರೀ ಭೂಕಂಪದ
ಅವಶೇಷದಡಿ ಎಲ್ಲರೂ
ತಮ್ಮ ತಮ್ಮ ವಸ್ತುಗಳ ಹುಡುಕುತ್ತಿದ್ದಾರೆ;
ಸಂತನೂ ಹುಡುಕುತ್ತಿದ್ದಾನೆ,
ರಾತ್ರಿ ಮಲಗುವ ಮುನ್ನ
ಆರಿಸಿಟ್ಟ ಹಣತೆಯ ಬೆಳಕ ..

~ಹುಸೇನಿ

8 thoughts on “ಸಂತ

 1. ಹುಸೇನ್ ಸರ್ ಯಾಕೆ‌ ಇಷ್ಟು ದಿನ‌ ಕಾಣಿಸಿಲ್ಲ ನಿಮ್ಮ‌ಕವನ‌ ಸಾರಾಂಶ ಅದ್ಬುತ ಬರೆಯೊದನ್ನು
  ನಿಲ್ಲಿಸಬೇಡಿ

  Liked by 1 person

 2. Good afternoon sir..
  ಆಕಸ್ಮಿಕವಾಗಿ ನಿಮ್ಮ ಬರಹದ blog add.ಸಿಕ್ಕಿತು..ನಿಜವಾಗಿಯೂ ನೀವೊಬ್ಬ ಅದ್ಭುತ ಬರಹಗಾರ..

  Liked by 1 person

 3. ಅಪರಿಚಿತ ಸಂತ
  ಅಪರಿಚಿತದಿ ನಿಂತ
  ಅಪರಿಚಿತ ಕಾಲುದಾರಿ

  ಬೇಡುವುದು ಏನು
  ಕೊಡುವೆಯಾ ನೀನು
  ಕೊಡುವೆಯಾ ನಾ ಬೇಡಿದನ್ನು

  ಶಾಂತಿ ಸಂತನ ಮಾತು ಒಗಟು
  ಚಿಂತೆ ಇಲ್ಲದೆ ನೀ ಕೇಳು ಎಂದೆ
  ಬ್ರಾಂತಿಯೊಳಗೊ ನಾನೇ ಇದ್ದೆ

  ಇಲ್ಲ ಚಿಂತೆ ಈ ಜೋಳಿಗೆಯಲ್ಲಿ
  ಎಲ್ಲ ಕ್ರಾಂತಿಯು ನಿನ್ನ ಒಳಗೆ
  ಒಲ್ಲೆ ಎನದೆ ನೀಡು ನನಗೆ

  ನೀಡುವೆಯಾ ಎಲ್ಲ ಸ್ವಾರ್ಥವನ್ನು
  ನೀಡಿಬಿಡು ಜಗದ ಕೋಪವನ್ನು
  ನೀಡಿ ನೋಡು ಅಷ್ಟ ದೋಷವನ್ನು

  ನೀನು ನಿನ್ನದು ಏನು ಇಲ್ಲ
  ನಾನೇ ತುಂಬಿರಲು ಜಗದಿ ಎಲ್ಲ
  ಹಾನಿಯಿಲ್ಲ ನೀಡುವೆಯಾ ನೀನೇ ನಿನ್ನನ್ನು

  ಕೆಲಸಗಳು ಸಾಗಲಿ ಫಲಾಪೇಕ್ಷೆ ಬೇಡ
  ಕೆಲಸಗಳೇ ಫಲ ಇಲ್ಲಿ ಎಂದೂ
  ವಲಸಿಗರಿಗೆಷ್ಟೂ ಫಲ ಬೇಕು ನೀನೇ ಹೇಳು

  ಮರ್ಮ ತುಂಬಿರಲು ಇವನ ಮಾತಲ್ಲಿ
  ಕರ್ಮದ ನಿಜ ಸಿದ್ಧಾಂತ ಹೇಳಿ
  ಧರ್ಮದ ದಾರಿಯೊಳು ನಿಂತ ಸಂತ

  ಅವನೇ ಬೇಡಿ ಅವನೇ ಕೊಟ್ಟ
  ಶಿವನೇ ಬಂದನೋ ಸಂತನಾಗಿ?
  ಇವನು ನಿರಂತರ, ಮತ್ತೆ ಸಾಗಿದ ಬೇಡಲು.

  ~ ಶ್ರೀಕಾಂತ ಪಳೋಟಿ

  ನಿಮ್ಮ ಈ ಕವನದಿಂದ ಸ್ಪೂರ್ತಿಯಾಗಿ ಬರೆದಿದ್ದು ಅಣ್ಣ…
  ನಮ್ಮಿಬ್ಬರ ಸಂತರೂ ಬೇರೆ… ಅಲ್ಲಲ್ಲ ಒಂದೇ…
  ಬೇರೆ ಮಾಡುವ ಅಗತ್ಯವೂ ಇಲ್ಲ ಇಲ್ಲಿ. ಮನದ ಮುಸಾಫಿರ್. ಎಲ್ಲರೊಳಗೊಬ್ಬ, ಕುವೆಂಪುರವರ ಕವಿತೆಯ ಹಾಗೆ, ಎಲ್ಲಿಯೂ ನಿಲ್ಲದ, ಮನೆಯನೆಂದು ಕಟ್ಟದ, ಕೊನೆಯನೆಂದು ಮುಟ್ಟದ, ಸತ್ಯ ಸಂತ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s