ಹುಸೇನಿ ಪದ್ಯಗಳು – 38 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 38


alone_beach_nenapina sanchi

೧)
ನಿನ್ನೆಲ್ಲಾ ನೆನಪ ಗುಡ್ಡ ಹಾಕಿ
ಬೆಂಕಿ ಹಚ್ಚಿದೆ, ಸುಟ್ಟು ಬೂದಿಯಾಗಿ
ಹೊಗೆ ಶ್ವಾಸದಲ್ಲಿ ಲೀನವಾಯ್ತು,
ನಾಳೆಯ ನನ್ನ ಉಸಿರಿಗೆ
ನಿನ್ನ ಗಂಧವಿರಬಹುದಾ .. ?

೨)
ನೀನಿಲ್ಲದೇ ಆ ತೀರ ಮೌನವಾಗಿತ್ತು.
ಮರಳನ್ನು ಮಾತನಾಡಿಸ ಹೊರಟೆ,
ಅವು ಶತಮಾನಗಳ
ನೀರಡಿಕೆಯಿಂದ ಬಳಲಿತ್ತು.

೩)
ನಿನ್ನ ಬದಲು ಆ ಕ್ಷಣದ
ನಿನ್ನ ಸ್ನಿಗ್ಧ ನಗುವಷ್ಟನ್ನೇ ತುಂಬಿಕೊಂಡೆ.
ಈ ಬದುಕು ಕಳೆಯಲು
ಅಷ್ಟೇ ಸಾಕೆನಿಸಿತು.

೪)
ಸಾವಿನ ಮನೆಯಲ್ಲಿ
ಅಗರಬತ್ತಿಯ ಸುವಾಸನೆ
ಮಂಕಾಗಿದ್ದ ಮುಖಗಳಲ್ಲಿ
ನವ ಚೈತನ್ಯ ತುಂಬುತ್ತಿದೆ..

ಹುಸೇನಿ ~

14 thoughts on “ಹುಸೇನಿ ಪದ್ಯಗಳು – 38

  1. It’s amazing sir thumba thumba thumba chanag edy ee kavithy thumb ista aythu nangy you are suppppppppppeeeeeerrrrrrr
    .
    .
    .
    .
    .
    .
    .
    Sir if you don’t mind nanu nimma kavanana fb le nan id le hakla plz……

    Liked by 1 person

  2. ಎಲ್ಲಿಂದ ತಹನಪ್ಪಾ ಈ ಕವಿ
    ದ್ವಂದ್ವ ಸಂದಿಗ್ದ ವ್ಯಂಗ್ಯ ಮೊತ್ತ ?
    ಹುಡುಕಿ ಹೊರಟೆ ನೆನಪಿನ ಸಂಚಿಯ
    ಖಾಲಿ ಚೀಲದ ತುಂಬಾ ಕನಸುಗಳಿತ್ತಾ !

    ಸ್ಪ್ಲೆಂಡಿಡ್ ಹುಸೇನಿ 🙂

    Liked by 1 person

  3. ನಿಮ್ಮ ಕವನಗಳನ್ಮ ಓದುವುದೆಂದರೆ ನನಗೆ ಹಬ್ಬ
    ನನ್ನ ಕಾಲೇಜು ಮುಗಿದೊಡನೆ ನೆನಪಾಗುವ ಮೊದಲ
    ಕೆಲಸ ನಿಮ್ಮ ನೆನಪಿನ ಸಂಚಿ…
    ಕೊಂಚ ಸಮಯ ಸಿಕ್ಕರೆ ಸಾಕು ನಿಮ್ಮ ಕವನಗಳನ್ನ
    ಎಲ್ಲೆಡೆ ಹುಡುಕುವ ಯತ್ನ ನನ್ನದಾಗಿರುತ್ತದೆ ಸರ್..
    ಅದೆಷ್ಟು ಬಾರಿ ಓದಿದರು ಮತ್ತೆ ಮತ್ತೆ ಓದುವ ಹಂಬಲ…

    I seriously search for certain words to describe
    ua writings sir….eagerly waiting for ua upcoming writings …

    Liked by 2 people

  4. ನಿಮ್ಮ ಕವನಗಳನ್ನು ಓದುವುದೇ ನಾನು ಮಾಡಿಕೊಂಡ ಹವ್ಯಾಸ
    ನಿಮ್ಮ್ ಕವಿತೆಗಳನ್ನು ನಂಗಿಷ್ಟವಾದವರಿಗೆ ಒಪ್ಪುವಂತ ಕವಿತೆಯನ್ನು ಕಲಿಸುತ್ತೇನೆ ಆದರೆ ಕೊನೆಯಲ್ಲಿ ಹುಸೇನಿ ಯಾವಾಗಲು ಇದ್ದೆ ಇರತ್ತೆ , ದನ್ಯವಾದಗಳು

    Like

Leave a reply to Jyo Cancel reply