ಊರ ಗುಡ್ಡದ ಹಾದಿಯಲ್ಲಿ... · ತೊರೆಯ ತೀರದ ನೆನಪುಗಳು

ಊರ ಗುಡ್ಡದ ಹಾದಿಯಲ್ಲಿ…


children

… ಅಮ್ಮನ ಕೊನೆಯ ಕೋಪದ ಕೂಗಿಗೆ ಎದ್ದೇಳುವುದು.. ದಾರಿಯಲ್ಲಿ ಕಾಯುವ ಸಹಪಾಠಿಗಳು .. ಆಮೇಲೆ ಊರ ಗುಡ್ಡದ ಹಾದಿಯಲ್ಲಿ ನಾಗಾಲೋಟ.. ಸ್ಲೇಟಿನಲ್ಲಿ ಬರೆದ ಮೊದಲ ಅಕ್ಷರ.. ಚಿಕ್ಕ ಚಿಕ್ಕ ತಪ್ಪುಗಳನ್ನು ಸುಲಭವಾಗಿ ಮಾಯಿಸಿ ಬಿಡಬಹುದು ಎಂಬ ಪಾಠವನ್ನು ನಮಗೆಲ್ಲಾ ಕಲಿಸಿದ್ದು ಅದೇ ಸ್ಲೇಟು ಅಲ್ವಾ ?. ವರ್ಷದ ಎಷ್ಟು ಕಳೆದರೂ ಆ ಕಾಲುದಾರಿಗಳು, ಆಟದ ಅಂಗಳಗಳು ಮತ್ತೆ ಮತ್ತೆ ಕರೆಯುತ್ತಿದೆ, ಆಡಿ ನಲಿದ ಆ ತರಗತಿ ವಠಾರಗಳು, ಬೊಬ್ಬೆ ಹೊಡೆಯುತ್ತಿದ್ದ ತರಗತಿಗಳು ಅದೆಲ್ಲವನ್ನೂ ಅನುಭವಿಸಲು.. ಆ ಬೆಂಚಲ್ಲೊಮ್ಮೆ ಕುಳಿತುಕೊಳ್ಳಲು.. ಆ ನನ್ನೆಲ್ಲಾ ಪುಂಡ ಗೆಳೆಯರೊಂದಿಗೆ ಇನ್ನೂ ಒಂದು ಬಾಲ್ಯಕಾಲ ಸಿಗಬಹುದೇ….?!!!. ಮೊದಲ ಬಾರಿಗೆ ಪೆನ್ಸಿಲಿನಲ್ಲಿ, ಕೈವಾರದಲ್ಲಿ ಡೆಸ್ಕ್ ಮೇಲೆ ಗೀಚಿದ ನನ್ನ ಹೆಸರು ಇನ್ನೂ ಅಲ್ಲೇ ಇರಬಹುದಾ ?….

ಅಂದ ಹಾಗೆ 12 ಗಂಟೆಗೆ ಒಂದು ಇಂಟರ್ವ್ಯೂ ಇದೆ. ಓದಕ್ಕೆ ಅಂತ ಕೂತಿದ್ದೇನೆ. ಬೆಳ್ಳಂಬೆಳಿಗ್ಗೆ 16 ಮಿಸ್ ಕಾಲ್ ಮಾಡಿ ಎಬ್ಬಿಸಿದವಳ ಒತ್ತಾಯಕ್ಕೆ… 🙂
ಈ ಮೌಸು, ಕೀ ಬೋರ್ಡು, ಮೊನಿಟರೂ, ಜಾವ, ಯುನಿಕ್ಷ್.. ಕರ್ಮ ಕಾಂಡಕ್ಕಿಂತ ಹರಿದ ನೀಲಿ ಬಿಳಿ ಅಂಗಿ.. ಹರಕಲು ಜೋಳಿಗೆ ಬ್ಯಾಗು.. ಪಾದದ ಅಂಚಲಿ ಸವೆದ ಚಪ್ಪಲಿ.. ಅರ್ದಂಬರ್ದ ಮುಗಿಸುವ ಮನೆ-ಲೆಕ್ಕಗಲೇ ವಾಸಿ ಅಂತ ಅವಳಿಗೇನು ಗೊತ್ತು…

~ ಹುಸೇನಿ

Leave a comment

2 thoughts on “ಊರ ಗುಡ್ಡದ ಹಾದಿಯಲ್ಲಿ…

  1. ನನ್ನದೊಂದಿಷ್ಟು ಕೊಸರು:
    *ಮಾವಿನ ತೋಪಲಿ ಕದ್ದ ಮಾವಿನ ಕಾಯಿ.
    *ಶುಕ್ರಾಚಾರಿ ಮಾಸ್ತರರ ಬೆತ್ತದ ಏಟು.
    *ಬಾಲ್ಯದ ಗೆಳತಿಯರಾದ ಮೀನಾಚ್ಚಿ, ಇಂದ್ರ, ಯಾದಮ್ಮ, ಸರ್ಸೂ…

    Missingಊ… 😦

    Liked by 1 person

Leave a reply to Badarinath Palavalli Cancel reply