ಸಂಪೂರ್ಣ ಮದ್ಯಮುಕ್ತ ರಾಜ್ಯದತ್ತ ಕೇರಳ

ಸಂಪೂರ್ಣ ಮದ್ಯಮುಕ್ತ ರಾಜ್ಯದತ್ತ ಕೇರಳ


Umman-Chandi
ಕೇರಳದ ಮುಖ್ಯಮಂತ್ರಿ ಶ್ರೀ ಉಮ್ಮನ್ ಚಾಂಡಿ ಕೇರಳವನ್ನು ಸಂಪೂರ್ಣ ಮದ್ಯ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದ್ದಾರೆ. ಕೇರಳದಲ್ಲಿ ಮದ್ಯವು ವಾರ್ಷಿಕ 9000 ಕೋಟಿ ರೂ ಆದಾಯ ತರುವ ಬೃಹತ್ ಉದ್ಯಮವಾಗಿದೆ. ಆದರೂ ಮದ್ಯ ಮಾಫಿಯಾದ ಯಾವುದೇ ಪ್ರಲೋಭೆಗೆ ಒಳಗಾಗದೆ ತನ್ನ ತೀರ್ಮಾನಕ್ಕೆ ಬದ್ದವಾಗಿ ಕಾರ್ಯನಿರ್ವಹಿಸುತಿರುವುದು ನೋಡಿದರೆ ಕೇರಳ ಮುಕ್ತ ರಾಜ್ಯವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

ತನ್ನ ಈ ತೀರ್ಮಾನದಲ್ಲಿ ಬಾರ್ ಉದ್ಯೋಗಿಗಳಿಗೆ ತೊಂದರೆ ಆಗದಂತೆ ಅವರು ಎಚ್ಚರವಹಿಸಿದ್ದು ಬಾರ್ ಉದ್ಯೋಗಿಗಳ ಪುನರ್ವಸತಿ ಕಲ್ಪಿಸಲು ನಿಧಿ’ಸ್ಥಾಪನೆ’ ಕೂಡ ಆಗಿದೆ.ಈಗಾಗಲೇ ಕೇರಳದಾದ್ಯಂತ ಈ ಹೊಸ ಮದ್ಯ ನೀತಿ ಅಪಾರ ಜನ ಮನ್ನಣೆ ಗಳಿಸಿದ್ದು ಸ್ತ್ರೀ ಸ್ವಯಂ ಸೇವಾ ಸಂಘಟನೆಗಳು ಧಾರ್ಮಿಕ, ಸಾಮಾಜಿಕ ಮುಖಂಡರು, ಕಾಲೇಜು ವಿಧ್ಯಾರ್ಥಿಗಳು ಇದರ ಯಶಸ್ವಿಗೆ ಕೈ ಜೋಡಿಸಿದ್ದಾರೆ

ಒಟ್ಟಿನಲ್ಲಿ ತನ್ನ “ಜನ ಸಂಪರ್ಕ” ಕಾರ್ಯಕ್ರಮಗಳಿಂದ ವಿಶ್ವದ ಹಲವು ನಾಯಕರ ಗಮನ ಸೆಳೆದಿದ್ದ ಉಮ್ಮನ್ ಚಾಂಡಿಯವರ ಈ ಸಮಾಜಪರ ತೀರ್ಮಾನಕ್ಕಾಗಿ ಅವರನ್ನು ಅಭಿನಂದಿಸೋಣ. ನಾಳಿನ ಮದ್ಯ ಮುಕ್ತ ಆರೋಗ್ಯಕರ ಸಮಾಜ ನಮ್ಮದಾಗಲಿ ಎಂದು ಹಾರೈಸೋಣ.

Leave a comment

3 thoughts on “ಸಂಪೂರ್ಣ ಮದ್ಯಮುಕ್ತ ರಾಜ್ಯದತ್ತ ಕೇರಳ

  1. ಶ್ಲಾಘನೀಯ ಬೆಳವಣಿಗೆ… 🙂
    ಮದ್ಯ ಅವರವರ ಬದುಕಿಗೆ ಮಾರಕವಾಗದ್ದಿದ್ದರೆ ಕೆಟ್ಟದೇನಲ್ಲಾ…

    ಆದರೆ ಅದೇ ಮದ್ಯ ಮಾರಕವಾಗಿ ಮಾರ್ಪಟ್ಟಾಗ ಇಂತಹ ಹೆಜ್ಜೆ ಇಡಬೇಕಾದ್ದು ಅನಿವಾರ್ಯ.. ಮತ್ತದನ್ನು ಕಾನೂನಿನ ಚೌಕಟ್ಟಿನಲ್ಲಿ ಮಾಡುವುದು ಪರಿಣಾಮಕಾರಿ…

    ಕೇರಳಕ್ಕೆ ಶುಭಾಶಯಗಳು..

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s