ಡೈರಿ

ಡೈರಿ-1


ದಿನಾ ಆಫೀಸಿಗೆ ಹೋಗಲು ಬಸ್ಸು ಕಾಯುವ ತಂಗುದಾಣದಲ್ಲಿ ಹಲವು ಮಂದಿ ಕುರುಡರು ಬಂದು ಇಳಿಯುತ್ತಾರೆ. ಹತ್ತಿರದಲ್ಲೆ ಕೇರಳ ಸಿವಿಲ್ ಸರ್ವಿಸ್ ಸ್ಟೇಷನ್ ಪಕ್ಕ ಅಂಧರ ಅಕಾಡೆಮಿಯೊಂದಿದೆ. ಬಸ್ಸು ಇಳಿದು ರಸ್ತೆ ದಾಟಿ ಹೋಗಬೇಕು. ರಸ್ತೆ ದಾಟಲು ಬಸ್ಸಿಗೆ ಕಾಯುವ ಮಂದಿಯೇ ಆಸರೆ. ನಾನೂ ಅದೆಷ್ಟೋ ಅಂಧರನ್ನು ರಸ್ತೆ ದಾಟಿಸಿದ್ದೇನೆ. ಹೀಗೆ ಅವರ ಕೈಯನ್ನು ಹಿಡಿದು ದಾಟಿಸುವಾಗ ಆವರ ಮೊಗದಲ್ಲೊಂದು ಧಿಡೀರಾಗಿ ಮೂಡುವ ಸಂಭ್ರಮವನ್ನು ಕಂಡಿದ್ದೇನೆ. ಸಮಾಜದಲ್ಲಿ ಎಲ್ಲರಿಂದಲೂ ತಿರಸ್ಕೃತರಾಗಿದ್ದರಿಂದಲೋ   ಎನೋ … ಅವರ ಕೈ ಹಿಡಿಯುವಾಗ ಅವರಲ್ಲಿ ಬದುಕಿನ ಸ್ಪೂರ್ತಿಯ ಸೆಳೆಯ ಕಿಡಿಯೊಂದು ಹಠಾತ್ತನೆ ಮೂಡುತ್ತದೆ. ಏನೋ ಕಳೆದುಕೊಂಡದ್ದನ್ನು ಮರಳಿ ಪಡೆದ ಸಂತಸ ಅವರ ಮೊಗದಲ್ಲಿ ಕಾಣುತ್ತೇನೆ. ಇತ್ತೀಚಿಗೆ ಪ್ರತೀ ದಿನ ಒಬ್ಬರನ್ನಾದರೂ ರಸ್ತೆ ದಾಟಿಸಿ ನಂತರ ಆಫೀಸಿಗೆ ಬಸ್ಸು ಹತ್ತುತ್ತೇನೆ.

ಅವರ ದಿನದಲ್ಲಿ ಒಂದಷ್ಟು ಘಳಿಗೆಯಾದರೂ ನಾವು -ನಿಮ್ಮೊಂದಿಗೆ ಇದ್ದೇವೆ ಎಂಬ ಭಾವನೆಯನ್ನು ಮೂಡಿಸಲು ಸಾದ್ಯವಾಯಿತೆಂಬ ಖುಷಿ ಇಡೀ ದಿನ ನನ್ನ ಪಾಲಿಗಿರುತ್ತದೆ. 

Add Comments

5 thoughts on “ಡೈರಿ-1

 1. ಕುರುಡರನ್ನೇನೋ ದಾಟಿಸಬಹುದು ಗೆಳೆಯಾ. ರಸ್ತೆ ದಾಟಿಸಿದ ಬಳಿಕ ನಿಮ್ಮ ನಮ್ಮ ಕರ್ತವ್ಯ ಮುಗಿಯಿತು. ಆದರೆ ಮದುವೆಯ ಭಾಗ್ಯವಿಲ್ಲದ ನೂರಾರು ಬಡ ಹುಡುಗಿಯರಿದಾರಲ್ಲ! ಹಗಲೆಲ್ಲ ನಗುತ್ತಿರುವ ಈ ಅಸಹಾಯಕರು ರಾತ್ರಿ ದಿಂಬಿಗೆ ತಲೆ ಇಟ್ಟ ಕ್ಷಣ ಕಣ್ಣೇರ ಅಭಿಷೇಕ ಮಾಡುತ್ತಿರುವರಲ್ಲ?
  ಯಾವ ಸರಕಾರ ಸಂಘ ಸಂಸ್ಥೆಗಳೂ ಇದಕ್ಕೊಂದು ಸಮಾಧಾನಕರ ದಾರಿ ಕಂಡುಕೊಳ್ಳುವುದರಲ್ಲಿ ಸಂಪೂರ್ಣ ಸೋತು ಬಿಟ್ಟಿವೆ.
  ಯಾಕೆ? ಯಾಕೆ!
  ಉತ್ತರ ಬೇಕೇ?

  Like

 2. adhre a edi arge adhrindha thamge kannila embha korgu amel banirbodala…. nangu kannididre jagatna kanbodala antha…. avru dairyadinda horge bandidare andre avr mansali thanu yara sahaya eldhe badkbeku ano avrallide adra mundhe namgala sahaya thumba kami alva

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s