ಶೂನ್ಯ ಮತ್ತಿತರ ನ್ಯಾನೋ ಕತೆಗಳು


ni
ಶೂನ್ಯ
ಆತ ಹೆಂಡತಿಯ ಅಣತಿಯಂತೆ ತುಂಬು ಕುಟುಂಬದಿಂದ ದೂರವಾಗಿ ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದ . ಮಧ್ಯ ರಾತ್ರಿ ತಂದೆ ಕಾಣೆಯಾಗಿದ್ದಾರೆಂದು ತಮ್ಮನ ಫೋನ್ ಬಂದಿತ್ತು . ಫೋನ್ ಇಟ್ಟವನೇ “ನಾನೇನು ಮಾಡಲಿ ದೇವರೇ..?” ಎಂದು ದಿಗ್ಭ್ರಮೆಗೊಂಡು ತನ್ನಂತಾನೆ ಪ್ರಶ್ನಿಸಿಕೊಂಡ.
“ಸದ್ಯ ಲೈಟ್ ಆಫ್ ಮಾಡಿ… ಅಷ್ಟು ಸಾಕು !” ಹೆಂಡತಿ ನಿದ್ದೆಗಣ್ಣಲ್ಲಿ ಚಾಟಿ ಬೀಸಿದಳು.
ಬೆಳಿಗ್ಗೆ ಅವಳಿಗೆ ತನ್ನ ತಂದೆ ತೀರಿ ಹೋದರೆಂದು ಫೋನ್ ಬಂದಿತ್ತು. ಮಲಗಿದ್ದ ಗಂಡನನ್ನು ಎದ್ದೇಳಿಸಲು ಸಾದ್ಯವಾಗದೆ ಶೂನ್ಯ ಭಾವದಿಂದ ಅವನನ್ನು ದಿಟ್ಟಿಸುತ್ತಾ ನಿಂತಳು .

ಮೋಸ
ಬಹುಮತದಿಂದ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯ ೧ ರೂ ಗೆ ಅಕ್ಕಿ ಕೊಟ್ಟು ಇದು ನನ್ನ ಮತ್ತು ನನ್ನ ಪಕ್ಷದ ಕೊಡುಗೆಯೆಂದು ಅಕ್ಕಿ ಮೂಟೆ ಮೇಲೆ ತನ್ನ ಮತ್ತು ತನ್ನ ಪಕ್ಷದ ಚಿನ್ಹೆಯನ್ನು ಅಚ್ಚು ಹಾಕಿಸಿದರು.
ಅದೇ ಮುಖ್ಯಮಂತ್ರಿಯ ಆಡಳಿತ ಕಾಲದಲ್ಲಿ ಬೆಲೆಯೇರಿಕೆಯ ಬಿಸಿಯಿಂದ ಸಾಲಗಾರನಾದ ರೈತನ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿತು.
ಇದು ಕೂಡ ಅದೇ ಮುಖ್ಯಮಂತ್ರಿಯ ಮತ್ತವರ ಪಕ್ಷದ ಕೊಡುಗೆಯಾಗಿದ್ದರೂ ಅವರ ಶವ ಪೆಟ್ಟಿಗೆಯ ಮೇಲೆ ತನ್ನ ಮತ್ತು ತನ್ನ ಪಕ್ಷದ ಚಿನ್ಹೆಯ ಅಚ್ಚು ಹಾಕಿಸಿರಲಿಲ್ಲ.

ವಾರ್ತೆ
“ಹದಿನಾರರ ತರುಣಿಯ ಮೇಲೆ ಗ್ಯಾಂಗ್ ರೇಪ್” ಎಂಬ ತಲೆ ಬರಹದಲ್ಲಿ ಹದಿ ಹರೆಯದ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಸುದ್ದಿಯನ್ನು ವರ್ಣರಂಜಿತವಾಗಿ ಪ್ರಕಟಿಸಿ ದೊಡ್ಡ ವಾರ್ತೆಯಾಗಿಸಿದ ಆ ಪರ್ತಕರ್ತ ಅಕ್ಷರದಲ್ಲೇ ಆಕೆಯನ್ನು ಮತ್ತೊಮ್ಮೆ ಅತ್ಯಚಾರಗೈದಿದ್ದ ಸುದ್ದಿ ವಾರ್ತೆಯಾಗಲೇ ಇಲ್ಲ.

ಪೂಜನೀಯ
“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತ:” ನಮ್ಮ ದೇಶ ಮಹಿಳೆಯರಿಗೆ ಕೊಟ್ಟ ಪೂಜನೀಯ ಸ್ಥಾನವನ್ನು ಹೆಮ್ಮೆಯಿಂದ ಆ ಸ್ವಾಮೀಜಿ ನೆರೆದ ದೇಶ ವಿದೇಶದಿಂದ ಬಂದ ಸಭಿಕರೆದುರು ಪ್ರವಚಿಸುತ್ತಿದ್ದರು.
“ಜಲ ಪ್ರಳಯ : ಸಂಕಷ್ಟದಲ್ಲಿ ಸಿಲುಕಿದ ತಾಯಿ ಮಗಳ ಮೇಲೆ ಅತ್ಯಾಚಾರ ಮತ್ತು ಕೊಲೆ” ಮರುದಿನ ಪತ್ರಿಕೆಯ ಮುಖಪುಟದಲ್ಲಿ ಸುದ್ದಿಯೊಂದು ದೊಡ್ಡ ಅಕ್ಷರದಲ್ಲಿ ಪ್ರಕಟವಾಗಿತ್ತು.

ಸೇವೆ
ನಗರದ ಹೃದಯ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ಮಾಡಿದ ಸ್ವಾಮೀಜಿ ಉತ್ತಮ “ಸೇವೆ” ನೀಡುವಂತೆ ಹಾರೈಸಿದರು.
ನೆರೆದ ಸಭಿಕರಲ್ಲಿ ಇಬ್ಬರಿಗೆ ಎದೆ ನೋವು ಕಾಣಿಸಿಕೊಂಡಿತು.

(ನ್ಯಾನೋ ಕತೆಯನ್ನು ದಯವಿಟ್ಟು ನಿಲ್ಲಿಸಬೇಡಿ ಅಂತ ಹಲವಾರು ಗೆಳೆಯರು ಕೋರಿಕೊಂಡಿದ್ದರು .. ಗೆಳೆಯರೇ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ )

ಪ್ರತಿಕ್ರಿಯಿಸಿ

16 thoughts on “ಶೂನ್ಯ ಮತ್ತಿತರ ನ್ಯಾನೋ ಕತೆಗಳು

Add yours

  1. ಮೊದಲನೆಯ ಕಥೆ ಸೂಪರ್.. ಮಿಕ್ಕವು ಮಸ್ತ್.. ಮಾಡಿದ್ದನ್ನು ಅನುಭವಿಸಲೇ ಬೇಕು… ಸುಂದರವಾಗಿವೆ ಕಥೆಗಳು

    Like

  2. ಮೊದಲನೆಯಾದಾಗಿ ಅಭಿನಂದನೆಗಳು ಹುಸ್ಸೈನ್ ಜೀ… ಮತ್ತಷ್ಟು ಲಕ್ಷಗಳು ಸೇರ್ಪಡೆಗೊಳ್ಳಲಿ…
    Wish u All the best.. & congratulations..

    ನಾಲಕ್ಕು ಸಾಲುಗಳಲ್ಲಿ ಒಂದೀಡಿ ಬದುಕಿನ ಕಥೆ, ಅದರೊಳಗೆ ಅಡಕವಾಗಿರುವಂತೆ ಕೊಡೊ ಮೆಸೇಜ್ ನಿಜಕ್ಕೂ ಸವಾಲಿನ ಕೆಲಸ. ಅದನ್ನು ನೀವು ಗೆದ್ದಿದ್ದಿರಿ.. ಇಷ್ಟರಲ್ಲಿ ಯಾವುದಿಷ್ಟ ಅಂತ ನೀವು ಕೇಳಿದರೆ ಉತ್ತರ ಹೇಳುವುದು ಕಷ್ಟ.. ಎಲ್ಲವೂ ಮನಸ್ಸಿಗೆ ತಟ್ಟುವ ಹಾಗಿದೆ.. ಮತ್ತಷ್ಟು ಮಗದಷ್ಟು ನ್ಯಾನೋ ಗಳ ನಿರೀಕ್ಷೆಯಲ್ಲಿ

    -ಸುಷ್ಮಾ ಮೂಡುಬಿದರೆ.

    Like

  3. ಮೊದಲ ಕಥೆ ತುಂಬಾ ಇಷ್ಟವಾಯಿತು.. ಎಲ್ಲವು ಚೆನ್ನಾಗಿವೆ…

    Like

  4. ಎಲ್ಲವೂ ತುಂಬ ಚೆನ್ನಾಗಿದೆ. ನಿಮ್ಮ ಬರಹದ ಶೈಲಿ, ಆರಿಸಿಕೊಂಡ ವಿಷಯಗಳು.. ಪ್ರತಿಯೊಂದು. ಹೀಗೆ ಮುಂದುವರಿಸಿ, ಮುಂದುವರಿಯಿರಿ. God Bless you 🙂

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Create a free website or blog at WordPress.com.

Up ↑

Kannada Club

My WordPress Blog

ನೆನಪಿನ ಸಂಚಿ

ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…

ಆಂತರ್ಯ

ನನ್ನ ಜೀವದ ಗೆಳೆಯ

ಮನದಿಂಗಿತಗಳ ಸ್ವಗತ

ಮನದಿಂಗಿತಗಳ ಅವಿರತ ಸ್ವಗತ, ಆಗುವುದೆಂತೊ ನಿರಂತರ ಅಗಣಿತ ? ಲೀಲೆಯವನ ಕೈಗೊಂಬೆ ಆದರೂ ವಿಸ್ಮಯವಿದ ನಂಬೇ !

ಭಾವ ವೀಣೆ

ಭಾವನೆಗಳ ವೀಣೆ ಮಿಡಿದಾಗ . . ಪದವಾಯ್ತು ಬರೆಯವ ಕನಸು. . .

ನಾನ ಕಂಡಂತೆ

ಮನವೆಂಬ ಸಾಗರದಲ್ಲಿ ಭಾವನೆಗಳ ಅಲೆಗಳು.....

ಮೌನರಾಗ

ಮೌನಾಂ'ತರಂಗ'.... ಮೀಟಿದ ಭಾವ'ತರಂಗ'

kannadakavi

ಕನ್ನಡದ ತಾಣ ಕನ್ನಡವೇ ಪ್ರಾಣ

ಕನ್ನಡ ಕಾದಂಬರಿ ಲೋಕ

ಎಂಟು ಜ್ಞಾನಪೀಠಗಳ ಹೆಮ್ಮೆ ನಮ್ಮ ಕನ್ನಡ ಸಾಹಿತ್ಯ ಲೋಕ..

WELCOME TO MY BLOG!

Recipes... Articles... Crafts...

ಭಾವಾಂತರಂಗ

ಭಾವನೆಗಳು ಅಕ್ಷರವಾದಾಗ

കുന്നിമണികൾ                                                                

journey down memory lane..                                                                                                 

ಕಲ್ಲಾರೆಗುರುವಿನ ಮನದಾಳದಲ್ಲಿ...

ಬದುಕಿನ ನೋಟ. ಬದುಕಿನೊಂದಿಗಿನ ಓಟ

Sandhyadeepa....

ನೆನಪು ಭಾವನೆಗಳೊಂದಿಗೆ ಸಂಘಷ೯ ಬರೆಯುತಿರುವೆ ಚಿತ್ತಾಕಷ೯ಕವಾಗಿ, ಇದು ನಿರಂತರ.........

ಭಾವನಾಲಹರಿ

ನನ್ನ ಭಾವನೆಗಳ ಲಹರಿ

jamunarani

Just another WordPress.com site

ಮಂದಾಕಿನಿಯ ಕಾಲ್ನಡಿಗೆ

ಶೂನ್ಯದಿಂದ-ಶೂನ್ಯದೆಡೆಗೆ

ಎಳೆ ಮನಸ್ಸು

ಎಳೆ ಮನಸಿನ ಭಾವ ತೇರು..

ರಮ್ಯಸೃಷ್ಟಿ

ಸು೦ದರ ಸಾಹಿತ್ಯ ಲೋಖ.!

KASIM s WORD

ನನ್ನ ಮನದ ಮಾತುಗಳು

ಮುಖವಾಡ

ಮನದಾಳದ ಮಾತುಗಳು ...

ಮಳೆಗಾಲದ ರಂಗೋಲಿ

ಮಾತಿಗೆ ಸಿಗದ ಶಬ್ಧಗಳು ಮಳೆಹನಿಗಳಾದಾಗ...

World

as it is..!

musafir

Welcome to musafir

ಚಿಂಗಾರಿ

ಭಾವ ಲೋಕದ ರಾಯಭಾರಿ. . . .

ಪೊಡವಿ

ಬರುಡಾಗಿರುವೀ ಹಸಿರಿನ ಚಿಗುರಿಗೆ!

krisv32

This WordPress.com site is the cat’s pajamas

Rprakash99's Weblog

Just another WordPress.com weblog

ಪೊನ್ನೋಡಿಯ ಪುಟ

ಜಬ್ಬಾರ್ ಪೊನ್ನೋಡಿ ಗೀಚಿದ್ದು ಅಂತರ್ಜಾಲದಲ್ಲೀಗ...

ಋತಾ ಅನಾಮಿಕಾ

ಅಲೆಮಾರಿಯ ರೆಕ್ಕೆ ಬೀಸು....

ಬದರಿ ನಾರಾಯಣ ನ ಕಾವ್ಯ ಪ್ರಪಂಚ ... Badari's Poetry ...

ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ...

ಶಿಮ್ಲಡ್ಕ ಉಮೇಶ್‌

ಮನದ ಮಾತು ಹೇಳೋಕಲ್ಲ ಬರೆಯೋಕ್ ಮಾತ್ರ...

ಪಂಡಿತ ಪುಟ

ಜಾಲ ಚರಿ

ಭಾವಶರಧಿ

ನನ್ನ ಸವಿನೆನಪುಗಳ,ಹೊಸಕನಸುಗಳ,ಅನುಭವಗಳ ಅಬುಧಿ

ಮನದ ದನಿ

ಪಾಪದ ಹುಡುಗನ ಪಿಸುಮಾತು..

ಅಜ್ಜಿಮನೆ....

ಬದುಕಿನ ನೆನಪಿನಂಗಳ...

ಗುಲ್ಮೊಹರ್

ನನ್ನೆದೆಯ ಸಂಭ್ರಮ ... !

Tinazone-ಕಣ್ಣ ಕೋಣೆಯ ಕಿಟಕಿ...

ಒಂದಿಷ್ಟು ಹರಟೆ, ತರಲೆ, ಗಲಾಟೆ, ನಗು, ಕವಿತೆ...

ಮನಕ್ಕೆ ನೆನಹಾಗಿ...

ಬ್ರಹ್ಮಾಂಡದ ಗೊಂದಲಕ್ಕೆ ನನ್ನ ಕೊಡುಗೆ. ಒಂದಷ್ಟು ಬರೆಹ, ಒಂದಿಷ್ಟು ಹರಟೆ, ಮತ್ತೇನೋ ವಿಚಾರ, ಸಿಕ್ಕಷ್ಟು ಸಹಾನುಭೂತಿ

.ಮಾತಿಲ್ಲದ ಮೌನ ರಾಗಗಳು.

ಮಾತಿಗೂ ನಿಲುಕದ ಮೌನ...

ಸುವಿ..!

ಸವಿ ಅನುರಾಗದ ಪಲ್ಲವಿ..

%d bloggers like this: