ಸಣ್ಣ ಕತೆ

ಹಗಲು ಕನಸಿನ ಬೆನ್ನೇರಿ …


ಎಲ್ಲ ಆಧುನಿಕ ಭಾರತೀಯ ಹೆತ್ತವರ ಕನಸಂತೆ ನಾನು ಕೂಡ ಸಾಫ್ಟ್ವೇರ್ ಇಂಜಿನಿಯರಿಂಗ್ ನಲ್ಲಿ ಡಿಗ್ರಿ ಪಡೆದು ಅಮೇರಿಕ ಮೂಲದ MNC ಕಂಪನಿಯಲ್ಲಿ ಉದ್ಯೋಗ ಪಡೆದೆ. ಅಮೇರಿಕ ಎಂಬುದು ನನ್ನ (ನಮ್ಮ )ಪಾಲಿಗೆ ಅವಕಾಶಗಳ ಹೊಸ ಜಗತ್ತು. ಮನಸ್ಸಿನಲ್ಲಿಯೇ ಸಾವಿರಾರು ಹಗಲು ಕನಸಿನ ಗೋಪುರವನ್ನು ಕಟ್ಟಿ, ಆ ಕನಸುಗಳ ಬೆನ್ನೇರಿ ನಾನು ಅಮೆರಿಕಕ್ಕೆ ಹಾರಿದೆ.ಇಲ್ಲಿ ನಾನಂದುಕೊಂಡ ಸೌಲಭ್ಯಗಳು ನನಗೆ ಸಿಕ್ಕಿತು. ಇಲ್ಲೇ ನಾಲ್ಕೈದು ವರ್ಷ ದುಡಿದು, ಕೈ ತುಂಬಾ ಹಣ ಗಳಿಸಿ ಊರಲ್ಲಿ ಸೆಟ್ಲ್ ಆಗಬೇಕೆಂದು ತೀರ್ಮಾನಿಸಿದೆ . ನನ್ನ ತಂದೆಯವರು ಸರ್ಕಾರಿ ಉದ್ಯೋಗಿ. ವರ್ಷಗಳ ಕಾಲ ದುಡಿದು ರಿಟೈರ್ ಆದ ನಂತರ ಅವರು ಗಳಿಸಿದ ಆಸ್ತಿ ಕೇವಲ ಒಂದು ಬೆಡ್ ರೂಂ ಮನೆ ಮಾತ್ರ.

ನಾನು ಅವರಿಗಿಂತ ಹೆಚ್ಚು ಸಂಪಾದನೆ ಮಾಡಬೇಕೆಂದುಕೊಂಡೆ. ಸಮಯ ಉರುಳುತ್ತಾ ಇತ್ತು . ಜೊತೆಗೆ ನನಗೂ ಮನೆಯ ನೆನಪುಗಳು ಕಾಡ ತೊಡಗಿತು . ಇಲ್ಲಿ ಸಿಗುವ international calling card ಮೂಲಕ ವಾರಕ್ಕೊಮ್ಮೆ ನನ್ನ ತಂದೆ ತಾಯಿ ಹತ್ತಿರ ಮಾತನಾಡಿ ಸಮಾಧಾನಪಡುತ್ತಿದ್ದೆ.
ಎರಡು ವರ್ಷ ಉರುಳಿತು . ಎರಡು ವರ್ಷಗಳ ಬರ್ಗರ್, ಪಿಜ್ಜಾ ಹಟ್ ಮತ್ತು ಡಿಸ್ಕೋ …ಅಂತ ಹೇಳಬಹುದು. ಈ ಸಮಯದಲ್ಲಿ ಡಾಲರ್ ಎದುರು ರುಪಾಯಿ ಅಪಮೌಲ್ಯಕ್ಕೊಳಗಾದಾಗೆಲ್ಲ ನಾನು ಒಳಗೊಳಗೇ ಸಂಭ್ರಮಿಸುತ್ತಿದ್ದೆ.

ಕೊನೆಗೊಂದು ದಿನ ನಾನು ಮದುವೆಯಾಗಲು ತೀರ್ಮಾನಿಸಿ, ನನಗೆ ಕೇವಲ ಹತ್ತು ದಿನ ಮಾತ್ರ ರಜ ಇದೆಯೆಂದೂ ಎಲ್ಲವೂ ಅದರೊಳಗೆ ನಡೆಯಬೇಕೆಂದು ತಂದೆ ತಾಯಿಯಲ್ಲಿ ಹೇಳಿದೆ. ಹೋಗುವ ದಿನಾಂಕವನ್ನು ಗೊತ್ತುಪಡಿಸಿ ವಿಮಾನದಲ್ಲಿ ಟಿಕೇಟ್ ಬುಕ್ ಮಾಡಿದೆ. ಮನೆಮಂದಿಗೆ ಮತ್ತು ಗೆಳೆಯರಿಗೆಲ್ಲ ಉಡುಗೊರೆಯನ್ನು ಖರೀದಿಸಿದೆ. ಅವರೆಲ್ಲರನ್ನು ಸಂತೋಷಗೊಳಿಸಬೇಕೆಂಬ ಹಂಬಲ ನನ್ನಲ್ಲಿತ್ತು. ಮನೆಗೆ ಬಂದವನೇ ಒಂದು ವಾರ ರಾಶಿಬಿದ್ದ ಹುಡುಗಿಯರ ಫೋಟೋದಲ್ಲಿ ಯಾರನ್ನು ಆರಿಸಬೇಕೆಂಬ ಗೊಂದಲದಲ್ಲಿ ಕಳೆದೆ. ನನ್ನ ರಜೆ ಮುಗಿತಾ ಬಂತು, ಕೊನೆಗೆ ಸಮಯದ ಅಭಾವನ್ನು ಅರಿತ ನಾನು ಒಬ್ಬಳನ್ನು ಆರಿಸಲೆಬೇಕಾದ ಪರಿಸ್ಥಿತಿಗೆ ತಲುಪಿದೆ.

ಮುಂದಿನ ಮೂರು ದಿನಗಳಲ್ಲಿ ಮದುವೆ ಕಳೆಯಿತು …!, ಹೆಚ್ಚಿನ ರಜ ಸಿಗದ ಕಾರಣ ನಾನು ಮತ್ತೆ ಅಮೆರಿಕಾಗೆ ಹೊರಟು ನಿಂತೆ. ಸ್ವಲ್ಪ ಹಣವನ್ನು ಹೆತ್ತವರಿಗೊಪ್ಪಿಸಿ , ನೆರೆ ಮನೆಯವರಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಹೊರಟೆ …

ಆರಂಭದಲ್ಲಿ ನನ್ನ ಹೆಂಡತಿಗೂ ಇಲ್ಲಿಯ ವಾತಾವರಣ ಇಷ್ಟವಾಯ್ತು .. ಕ್ರಮೇಣ ಅವಳಿಗೂ ಮನೆಯ ನೆನಪುಗಳು ಕಾಡತೊಡಗಿತು. ಜೊತೆಗೆ ಊರಿಗೆ ಮಾಡುವ ಕಾಲ್ ಗಳ ಸಂಖ್ಯೆ ವಾರದಲ್ಲಿ ಒಂದರಿಂದ ನಾಲ್ಕು-ಐದಕ್ಕೆ ಏರಿತ್ತು. ಜೊತೆಗೆ ನಮ್ಮ ಉಳಿತಾಯವೂ ಕ್ಷೀಣಿಸುತ್ತಾ ಬಂತು .ಎರಡು ವರ್ಷಗಳ ನಂತರ ನಮಗೆಮೊದಲ ಮಗು ಹುಟ್ಟಿತು . ಇನ್ನೆರಡು ವರ್ಷದಲ್ಲಿ ಮತ್ತೊಂದು ಮಗುವಾಯ್ತು .ಒಂದು ಗಂಡು, ಒಂದು ಹೆಣ್ಣು ಮಗುವನ್ನು ದೇವರು ಕರುಣಿಸಿದ. ಪ್ರತೀ ಬಾರಿ ನಾನು ಕಾಲ್ ಮಾಡಿದಾಗಲೂ ತಂದೆ ತಾಯಿ ಅವರ ಮುದ್ದು ಮೊಮ್ಮೊಕ್ಕಳನ್ನು ನೋಡಲು, ಭಾರತಕ್ಕೆ ಬರುವಂತೆ ಒತ್ತಡ ಹೇರುತ್ತಿದ್ದರು.

ಪ್ರತೀ ವರ್ಷ ಊರಿಗೆ ಹೋಗುವ ಪ್ಲಾನ್ ಹಾಕ್ತಾ ಇದ್ದೆ. ಕೆಲವೊಮ್ಮೆ ಕೆಲಸ, ಮತ್ತೊಮ್ಮೆ ಏನಾದ್ರೂ ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಲೇ ಇಲ್ಲ. ಭಾರತ ನಮ್ಮ ಪಾಲಿಗೆ ದೂರವಾಗುತ್ತಾ ಬಂತು.

ಅದೊಂದು ದಿನ ಅಚಾನಕ್ಕಾಗಿ ನನ್ನ ಮೊಬೈಲಿಗೆ ಸಂದೇಶ ಬಂತು. ಓದುತ್ತಿದ್ದಂತೆ ನಾನು ಕುಸಿದು ಬಿದ್ದೆ , ನನ್ನ ತಂದೆ ತಾಯಿ ಪಯಣಿಸುತ್ತಿದ್ದ ಕಾರು ಅಪಘಾತವಾಗಿದೆಯೆಂದೂ ತಕ್ಷಣ ನಾನು ಹೊರಡಬೇಕೆಂದು ಆಗಿತ್ತು ಆ ಸಂದೇಶ. ನಾನು ರಜೆಗೆ ಅರ್ಜಿ ಹಾಕಿದರೂ ರಜ ಸಿಗಲಿಲ್ಲ . ಮತ್ತೆ ಬಂದ ಮೆಸೇಜ್ ಅವರಿಬ್ಬರೂ ಇಹಲೋಕ ತ್ಯಜಿಸಿದ್ದಾರೆಂದಾಗಿತ್ತು . ನನಗೆ ಆಕಾಶವೇ ನನ್ನ ತಲೆಯ ಮೇಲೆ ಬಿದ್ದ ಅನುಭವ. ಅವರ ಕೊನೆಯ ಕರ್ಮಗಳನ್ನು ಮಾಡಲು ಯಾರೂ ಇಲ್ಲದೆ ಕೊನೆಗೆ ನಮ್ಮ ಸಂಬಂಧಿಗಳು ಸೇರಿ ಅದನ್ನು ನೆರವೇರಿಸಿದ್ದರು. ನಾನು ಮಾನಸಿಕವಾಗಿ ಜರ್ಜರಿತನಾದೆ. ನನ್ನ ಹೆತ್ತವರು ಅವರ ಮೊಮ್ಮಕ್ಕಳ ಮುಖವನ್ನು ನೋಡದೆ ಅಗಲಿದ್ದರು.

ಒಂದಿಷ್ಟು ವರ್ಷಗಳ ನಂತರ ನನ್ನ ಮಕ್ಕಳ ವಿರೋಧದ ನಡುವೆಯೂ ನಾವು ಭಾರತಕ್ಕೆ ಹಿಂದಿರುಗಿ ಬಂದೆವು . ನಾನು ನನ್ನದೇ ಆದ ಬಿಸಿನೆಸ್ ಶುರು ಮಾಡಲು ಪ್ರಾಪರ್ಟಿ ಖರೀದಿಸಲು ಮುಂದಾದೆ. ನನ್ನ ಉಳಿತಾಯ ಕಡಿಮೆ ಇದ್ದ ಕಾರಣ ನಾನಿಚ್ಚಿಸಿದಂಥಹ ಪ್ರಾಪರ್ಟಿ ಸಿಗಲಿಲ್ಲ . ಅದಲ್ಲದೆ ಈ ವರ್ಷಗಳಲ್ಲಿ ಭಾರತದಲ್ಲೂ ಪ್ರತೀ ವಸ್ತುವಿನ ಬೆಲೆ ಗಗನಕ್ಕೇರಿದ್ದವು. ಕೊನೆಗೆ ಅನ್ಯ ಮಾರ್ಗವಿಲ್ಲದೆ ನಾನು ಅಮೆರಿಕಕ್ಕೆ ಹೊರಟೆ.

ನನ್ನ ಹೆಂಡತಿ ಅಮೆರಿಕಕ್ಕೆ ಹೊರಡಲು ಒಪ್ಪಲಿಲ್ಲ . ಮಕ್ಕಳು ಭಾರತದಲ್ಲಿರಲು ಒಪ್ಪಲಿಲ್ಲ. ಎರಡು ವರ್ಷಗಳ ನಂತರ ನಾವು ಹಿಂದಿರುಗುವುದಾಗಿ ಹೆಂಡತಿಗೆ ಮಾತು ಕೊಟ್ಟು ನಾನು ಮಕ್ಕಳೊಂದಿಗೆ ಅಮೆರಿಕಕ್ಕೆ ಬಂದೆ.
ಕಾಲ ಉರುಳಿತು. ನನ್ನ ಮಗಳು ಮದುವೆಯಾಗಲು ತೀರ್ಮಾನಿಸಿ, ಅಮೇರಿಕ ಹುಡುಗನನ್ನು ವರಿಸಿದಳು. ನನ್ನ ಮಗನೂ ಅಮೆರಿಕವನ್ನು ಬಿಟ್ಟಿರುವ ಪರಿಸ್ಥಿತಿಯಲ್ಲಿರಲಿಲ್ಲ.
ನನಗೂ ವಯಸ್ಸಾಗುತ್ತಾ ಬಂತು. ಜೀವನದಲ್ಲಿ ಬಹಳಷ್ಟು ನೋವನ್ನೂ ಅನುಭವಿಸಿದ ನಾನು ಕೊನೆಗೆ ಎಲ್ಲವನ್ನು ತೊರೆದು ಭಾರತಕ್ಕೆ ಹೊರಟೆ.
ಊರಿಗೆ ಬಂದವನೇ ನನ್ನ ಉಳಿತಾಯದಿಂದ, ನಗರದ ಹೃದಯ ಭಾಗದ ಅಪಾರ್ಟ್ಮೆಂಟ್ ಒಂದರಲ್ಲಿ ಎರಡು ಬೆಡ್ರೂಮ್ ಫ್ಲಾಟ್ ಖರೀದಿಸಿದೆ.

ನನಗೀಗ ಅರುವತ್ತು ವರ್ಷ. ನಾನು ಮನೆಯಿಂದ ಹೊರಗೆ ಹೋಗುವುದು ಹತ್ತಿರದ ದೇವಸ್ಥಾನಕ್ಕೆ ಮಾತ್ರ. ನನ್ನ ಪ್ರಿಯ ಧರ್ಮಪತ್ನಿ ಕೂಡ ನನ್ನ ತೊರೆದು ಸ್ವರ್ಗ ಸೇರಿದ್ದಾಳೆ.

ಈ ಏಕಾಂತತೆಯ ಕತ್ತಲಲ್ಲಿ ಒಬ್ಬನೇ ಇರುವಾಗ ನಾನು ಯೋಚಿಸುತ್ತೇನೆ. ನನ್ನ ಜೀವನ… ನನ್ನ ಜೀವನವನ್ನು ನಾನು ಜೀವಿಸಿದ್ದೀನ..?
ನನ್ನ ತಂದೆ .. ನನ್ನ ತಂದೆ ತಾಯ್ನೆಲದಲ್ಲೇ ಇದ್ದು ತನ್ನ ಸ್ವಂತ ಹೆಸರಲ್ಲೇ ಮನೆಯನ್ನು ಹೊಂದಿದ್ದ . ನನ್ನಲ್ಲೂ ಅದೇ ಇದೆ.. ಏನು ಹೆಚ್ಚಿಲ್ಲ..

ನನ್ನ ತಂದೆಯನ್ನು ಹಾಗೂ ಮಕ್ಕಳನ್ನು ಕಳೆದುಕೊಂಡಿದ್ದೇನೆ …. ಯಾಕೆ ..?! “ಯಾಕೆ ನಾನು ಇಷ್ಟೆಲ್ಲಾ ಅನುಭವಿಸಿದ್ದು ..?” ಕೇವಲ ಒಂದು ಹೆಚ್ಚುವರಿ ಬೆಡ್ ರೂಮಿಗಾಗಿ …?!.
ಕಿಟಕಿಯಿಂದ ನಾನು ಆಡುವ ಮಕ್ಕಳನ್ನು ನೋಡುತ್ತಿದ್ದೇನೆ.. ನನಗೂ ಭಯವಾಗುತ್ತಿದೆ. ಈ ಡಿಜಿಟಲ್ ಸೆಟಪ್ ಬಾಕ್ಸ್ TV ಗಳು, ಇಂಟರ್ನೆಟ್’ಗಳು , 3G ,4G ಟೆಕ್ನಾಲಜಿಗಳು ನಮ್ಮ ಹೊಸ ತಲೆಮಾರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ನಮ್ಮಆಚಾರ , ವಿಚಾರ, ಸಂಸ್ಕೃತಿಗಳಿಂದ ಅವರನ್ನು ವಿಮುಖರನ್ನಾಗಿ ಮಾಡಿವೆ. ಆಧುನಿಕತೆಯ ಭರಾಟೆಯಲ್ಲಿ ಸಿಲುಕಿಕೊಂಡಿರುವ ನಾವು ನಮ್ಮ ಬದುಕನ್ನು ಹೇಗೆ ಕಟ್ಟಬೇಕೆಂದು ತಿಳಿಯದಷ್ಟು ವಿವೇಚನಾಶೂನ್ಯರಾಗಿದ್ದೇವೆ. ಅಸ್ಥಿರ ಮತ್ತು ವೇಗವಾದ ಜೀವನವೇ ಬದುಕಿನ ವೌಲ್ಯ ಎಂದು ಪರಿಗಣಿಸಿರುವ ನಾವು ಸಂಯಮ ಮತ್ತು ಸರಳತೆಯಿಂದ ಕೂಡಿದ ಜೀವನ ವ್ಯವಸ್ಥೆಯಿಂದ ದೂರವಾಗಿದ್ದೇವೆ. ಹಣ ಮತ್ತು ನಗರ ಕೇಂದ್ರೀಕೃತ ಯಾಂತ್ರಿಕ ಸಂಸ್ಕೃತಿಗೆ ಮಾರು ಹೋಗಿ ಬರೀ ದುಡ್ಡು ಗಳಿಸುವ ಯಂತ್ರಗಳಾಗಿದ್ದೇವೆ.

ನನ್ನ ಮಕ್ಕಳಿಂದ ಪ್ರತೀ ಹಬ್ಬಕ್ಕೆ ಕಾರ್ಡ್ಸ್ ಬರುತ್ತೆ .. ಅವರಾದರೂ ನನ್ನ ನೆನಪು ಮಾಡಿಕೊಳ್ಳುತ್ತಾರೆಂಬ ಸಮಾಧಾನವಿದೆ . ನನಗೆ ಗೊತ್ತು, ನಾನು ಸತ್ತಾಗ ನನ್ನ ನೆರೆಹೋರೆಯವರೇ ನನ್ನ ಅಂತ್ಯ ಸಂಸ್ಕಾರ ಮಾಡುತ್ತಾರೆ. ದೇವರು ಅವರನ್ನು ಅನುಗ್ರಹಿಸಲಿ …!

ಆದರೆ .. ಆದರೆ ಆ ಪ್ರಶ್ನೆ ಇನ್ನು ಬಾಕಿ ಉಳಿದಿದೆ … “ಯಾಕಾಗಿ ನಾನು ಇದೆಲ್ಲವನ್ನು ಮಾಡಿದ್ದು ..?”
“ಒಂದು ಹೆಚ್ಚುವರಿ ಬೆಡ್ ರೂಮಿಗಾಗಿ…?!”
ಸ್ಪಷ್ಟ ಉತ್ತರ ಇನ್ನು ಸಿಕ್ಕಿಲ್ಲ ….

ಒಂದು ಕ್ಷಣ ಯೋಚಿಸಿ ….!
“ಕೇವಲ ಒಂದು ಹೆಚ್ಚುವರಿ ಬೆಡ್ ರೂಮಿಗಾಗಿ ನಾನು ಎಲ್ಲವನ್ನು ಕಳೆದುಕೊಂಡದ್ದು” .
ಜೀವನ ಇದಕ್ಕಿಂತ ಎಷ್ಟೋ ದೊಡ್ಡದು. ಜೀವನವನ್ನು ಸುಮ್ಮನೆ ಕಳೆದುಕೊಳ್ಳಬೇಡಿ..
ಜೀವಿಸಿ. ಪ್ರತೀಕ್ಷಣ …ನಿಮಗೆ ಇಷ್ಟವಾದಂತೆ .., ಜೀವಕ್ಕೆ ವರ್ಷಗಳನ್ನು ತುಂಬಬೇಡಿ..ವರ್ಷಗಳಿಗೆ ಜೀವ ತುಂಬಿ ……!!
ಆಲ್ ದ ಬೆಸ್ಟ್ ….!

ಹುಸೇನ್
ಮೂಲ : ಅಂತರ್ಜಾಲ


ಹೇಗಿದೆ ಹೇಳಿ

35 thoughts on “ಹಗಲು ಕನಸಿನ ಬೆನ್ನೇರಿ …

  1. ಹಣ ಗಳಿಸುವ ಅಬ್ಬರದಲ್ಲಿ ನಾವು ನಮ್ಮವರ ಪ್ರೀತಿಯನ್ನು ಕಳೆದು ಕೊಳ್ಳುತ್ತಿದ್ದೇವೆ. ಅದನ್ನು ಯೋಚಿಸುವಷ್ಟು ಕೂಡ ನಮ್ಮ ಹತ್ತಿರ ಸಮಯವಿಲ್ಲ ಅನ್ನುವಷ್ಟರ ಮಟ್ಟಿಗೆ ನಾವಿಂದು ಬಂದು ತಲುಪಿದ್ದೇವೆ. ಆಧುನಿಕ ಜಗತ್ತಿಗೆ ಅನ್ವಯಿಸುವ ಸತ್ಯ ಕಥೆ. ಸುಂದರ ನಿರೂಪಣೆ.

    Like

  2. ಕಥೆಗಳು ನಿಜ ಜೀವನದಲ್ಲಿ ಹೊಕ್ಕು ನಮ್ಮೆದುರು ನಿಂತಾಗ ಆಗುವ ವಿಚಿತ್ರ ನೋವು ಸಂಕಟಗಳು ಈ ಲೇಖನದಲ್ಲಿ ಉಸಿರಾಡುತ್ತಾ ಮನೆ ಮಾಡಿವೆ.

    Like

  3. Jeevanadalli hanavanna bayasuttha hodare navu namma amulyavaada vasthugalanna kaledukollutheve adu matthe yavattu hinde baruvudilla. iruvudu onde jeevana khushiyinda anubhavisabeku.

    Like

  4. If I was in your place, Raje illadeyu koneya kshanadalladaru ee prapanchadalli namagagi baduko aa eradu jeevagalanna nodalu khanditha thadmadade horadutthidde. Sathosha annodu irodu nammalle, nimma kaledu hogiro kaladalli adu nimge dudiyodralli dudd madodralli sikthittu,.. Ivaga parithapisthidira aga nimmondigiddaru kanadidda nimmavarigagi.. Adre eega aa nenapugala nennatthi sadhisabekiruvudenu? Iruvudannu anubhavisi kala kaleyuva munna.. 🙂 Make friends, if yu have already live with em.. Life is only once..

    Like

  5. Bahutheka middle class yuvakaru intahadde thondareyalli silukiddare. Thamma ase Kammi madidare nammadiya jivana kana bahudu.

    Like

  6. ತುಂಬ ಚೆನಾಗಿದೆ ಹುಸೇನ್. ಕಥೆ ಎಷ್ಟೋ ಜನರಿಗೆ ಹೊಳೆಯುತ್ತದೆ ಆದರೆ ಅದನ್ನು ಚೆನ್ನಾಗಿ ನಿರೂಪಿಸುವುದು ಮುಖ್ಯ. ನಿಮ್ಮ ಬಾಷೆಯ ಫ್ಲೋ ಚೆನ್ನಾಗಿದೆ.

    Like

  7. ಸರ್, ತುಂಬಾ ಚೆನ್ನಾಗಿದೆ ಅನ್ನೋದಕ್ಕಿಂತ ತುಂಬಾ ಅಥ೵ಗಭಿ೵ತವಾಗಿದೆ. ನಿಮ್ಮ ಇ ಮೇಲ್ ಐಡಿ ಕೊದ್ತೀರಾ ಪ್ಲೀಸ್……….
    ನನ್ನ ಐಡಿ : ravitej.hims@gmail.com

    Like

  8. jeevanadalli money ginta sambhagale mukya money yaru bekadaru galisabahudu adare relationship annodu lifenalli very important dont miss the relationships

    Like

  9. jeevanadalli hanavanu yawaga bekadharu sampadisabahudhu adhre thanda thayiyannu ondhu baari kaledhukonda mele mathpadeyalu sadhyavilla

    Like

Leave a reply to ashwini h Cancel reply