7 comments on “ಆಟೋಗ್ರಾಫ್ -೧

 1. ಆಹಾ .. ಅದೆಂತಹ ಮಧುರ ಕ್ಷಣಗಳನ್ನು ಕಳೆದಿದ್ದೀಯ ಗೆಳೆಯಾ … ನನ್ನ PUC ದಿನಗಳು ಸುಮ್ಮನೆ ನೆನಪಾದವು

  Like

 2. Tuesday, 14 May 2013
  ಬೆಳೆಯಬಾರದಿತ್ತು ನಾವು..!!
  ಕಣ್ಣಗಲ ಆಗಸದಿ ಮುಷ್ಟಿಯಷ್ಟೇ ತಾರೆಗಳು
  ಚಂದಮಾಮನೆಡೆಗೆ ಬರೆದ ಚೋಟುದ್ದದ ಏಣಿ..
  ಮಾಡಿ ಮತ್ತೆ ಕೆಡಗುತಿದ್ದ ಮಣ್ಣು ಮರಳ ಮನೆಗಳು
  ಹರಿವ ಮಳೆಯ ನೀರಿನಲ್ಲಿ ಕಾಗದದಾ ದೋಣಿ..
  ಅಜ್ಜ ಹೇಳಿ ಕಲಿಸುತಿದ್ದ ಶಿಷ್ಟತೆಯ ಪಾಠಗಳು
  ಅಜ್ಜಿ ಹೇಳೋ ಕಥೆಗಳಲ್ಲಿ ಚಿನ್ನದಂತ ರಾಣಿ…
  ಅಪ್ಪನ ಕೈ ಹಿಡಿದು ನಡೆದ ಮರೆಯದೂರ ದಾರಿಗಳು
  ಅಮ್ಮನ ಮಡಿಲಲ್ಲಿ ಕಲಿತ ಮುತ್ತಿನಂತ ವಾಣಿ…
  ಭೇದಭಾವ ಮರೆತು ಕಲೆತು ಆಡುತಿದ್ದ ಆಟಗಳು
  ಹಬ್ಬದುಡುಗೆ ತೊಟ್ಟು ಮೆರೆಯುತಿದ್ದ ಓಣಿ…
  ಎಲ್ಲ ಈಗ ಬಿಡದೆ ಕಾಡಿ ಕೊಲುವ ಕನಸುಗಳು
  ಬೆಳೆಯಬಾರದಿತ್ತು ನಾವು ನಂಬಿ ದೇವರಾಣಿ..!!
  ಚಿತ್ರ ಕೃಪೆ: http://images.fineartamerica.com/
  Dileep Hegde at 5/14/2013 01:46:00 am
  6 comments:
  Badarinath Palavalli 14 May 2013 08:18
  ಮೊದಲು ನಿಮಗೆ ಅಭಿನಂದನೆಗಳು. ನಮ್ಮನ್ನು ಕಾಲದ ಯಂತ್ರದಲ್ಲಿ ಕೂರಿಸಿ ಸಲೀಸಾಗಿ ಬಾಲ್ಯಕ್ಕೆ ಕರೆದೊಯ್ದ ನಿಮ್ಮ ಕವನಕ್ಕೆ ಗೆಳೆಯ.
  “ಭೇದಭಾವ ಮರೆತು ಕಲೆತು ಆಡುತಿದ್ದ ಆಟಗಳು ” ಎನ್ನುವಾಗ ನಮ್ಮಲ್ಲಿದ್ದ ಸಮಾನ ಮನಸ್ಕ ಮನಸು ಮತ್ತು ಬೆಳೆದಂತೆಲ್ಲ ನಾವು ಅರಿಯದೇ ಹಾಕಿಕೊಳ್ಳುವ ಗೆರೆಗಳ ಬಗ್ಗೆ ನಿಮ್ಮ ವಿಷಾದ “ಬೆಳೆಯಬಾರದಿತ್ತು ನಾವು ನಂಬಿ ದೇವರಾಣಿ..!!” ಏತದೂ ಮನಗೆದ್ದವು.
  Reply
  ಸಂಧ್ಯಾ ಶ್ರೀಧರ್ ಭಟ್ 15 May 2013 17:42
  ಸಾಲುಗಳ ಚಂದ ಹುಡುಕಲು ಹೊರಟರೆ ಇಡೀ ಕವನವನ್ನೇ ಮತ್ತೆ ಕಾಪಿ ಮಾಡಬೇಕು. ಬಾಲ್ಯ ಮರೆಯಾಗಲೇಬಾರದಿತ್ತು. ನಿಮ್ಮ ಕವನದ ಮೂಲಕ ಮತ್ತೆ ಎಲ್ಲ ನೆನಪುಗಳು ಹಸಿ ಹಸಿ ವಾಪಸ್ ಬರುವ ಮನಸ್ಸೇ ಇಲ್ಲ.
  ಹೌದು ಬೆಳೆಯಲೇಬಾರದಿತ್ತುನಾವು… !!!! Reply
  ದಿಲೀಪ ಹೆಗಡೆ 16 May 2013 11:09
  ಬದರೀ ಸರ್.. ನಮಸ್ತೆ…
  ಬೆಳೀತಾ ಬೆಳೀತಾ ನಮ್ಮ ಸಹಜತೆಗಳನ್ನ ಮರೆತು ನಾವಲ್ಲದ ನಾವುಗಳಾಗೋದಕ್ಕೆ ಶತಾಯ ಗತಾಯ ಹಂಬಲಿಸುತ್ತೇವಲ್ಲ…ಅಲ್ಲಿಂದ ಶುರುವಾಗತ್ತೆ ಮತ್ತೆ.. ಮುಂದೊಮ್ಮೆ ಹಿಂದಿರುಗಿ ಹೋಗಿ ಮತ್ತೆ ಬಾಲ್ಯವನ್ನು ಜೀವಿಸೋಣ ಎಂಬ ಆಸೆ ವಿಪರೀತವಾಗುವ ಕಾಲಘಟ್ಟದ ಮುನ್ನುಡಿ… ಕವನ ಓದಿ ಕಾಲಯಂತ್ರದ ಮುಖೇನ ಬಾಲ್ಯವನ್ನೊಮ್ಮೆ ಸುತ್ತಿ ಬಂದು ಹರಸಿದ್ದಕ್ಕೆ ಧನ್ಯವಾದಗಳು.. Reply
  ದಿಲೀಪ ಹೆಗಡೆ 16 May 2013 11:14
  ಸಂಧ್ಯಾ…
  ಕವನ ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು… ಬೇಡ ಅಂದರೂ ಬಂದಾಗಿದೆ… ಇಲ್ಲಿ ಇರಬೇಕಾದುದು ವಾಸ್ತವ.. ಅವಕಾಶ ಸಿಕ್ಕಾಗಲೆಲ್ಲ ನೆನಪುಗಳ ನೆಪವೊಡ್ಡಿ ಆ ದಿನಗಳಿಗೊಮ್ಮೆ ಹೋಗಿ ಬರೋದು ನಮಗಿರೋ ಒಂದೇ ಆಯ್ಕೆ.. Reply
  bhagya bhat 16 May 2013 11:42
  ನಿಜ ಬೆಳೆಯಬಾರದಿತ್ತು ನಾವು …
  ಅದೇ ಹಳ್ಳಿಯ ಪುಟ್ಟ ಹುಡುಗರಾಗಿ ಹಾಗೆಯೇ ಮಸ್ತಿ, ಪ್ರೀತಿ,ಸ್ನೇಹಗಳ ಜೊತೆ ನೆಮ್ಮದಿಯಾಗಿರೋ ಪುಟ್ಟ ಪೋರರಾಗಿಯೇ ಉಳಿಯಬೇಕಿತ್ತೆಂಬ ನಿಮ್ಮ ಭಾವ ನನ್ನದೂ ಕೂಡಾ 🙂
  ಇಷ್ಟವಾಯ್ತು ಭಾವ ಲಹರಿಯಲ್ಲಿನ ನೆನಪುಗಳ ನೆನಪು …
  ಬರೀತಾ ಇರಿ
  ನಮಸ್ತೆ Reply
  Dileep Hegde 20 May 2013 00:28
  ಭಾಗ್ಯ ಭಟ್.. ಭಾವ ಲಹರಿಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.. ಬಾಲ್ಯವೇ ಹಾಗೆ.. ಎಂತವರ ಮನಸ್ಸಿನಲ್ಲೂ ಒಮ್ಮೆ ನೆನಪುಗಳ ಮಳೆ ಸುರಿದು ಪುಳುಕ ಹುಟ್ಟಿಸುತ್ತದೆ.. ಯಾರಿಗೂ ಕಾಯದೆ ಓದುವ ಕಾಲದ ಕೈ ಗೊಂಬೆಗಳು ನಾವು.. ನೆನಪುಗಳ ಆಳಗಳಲ್ಲಿ ಆಗಾಗ ಕಳೆದು ಹೋಗುವ ಅವಕಾಶ ನಮಗಿರುವುದಕ್ಕೆ ಹೆಮ್ಮೆ ಪಡಬೇಕಷ್ಟೆ.. Reply
  Add comment


  Home
  View web version

  Like

 3. Pingback: ಆಟೋಗ್ರಾಫ್ -೧ | ನೆನಪಿನ ಸಂಚಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s