ಕಾಡುವ ಹನಿಗಳು -೧೧ · ಹುಸೇನಿ ಪದ್ಯಗಳು - 13 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 13


Roses-for-a-lost-love-a29108270

೧.
ನೆನಪಿನ ಪುಟಗಳಲ್ಲಿ ಅಡರಿ ಬಿದ್ದ
ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ
ನಿನ್ನ ರೂಪವಿತ್ತು..
ಇಂದು ನನ್ನ ವಿರಹಕ್ಕೂ…!
೨.
ದುಃಖ ಸತ್ಯಗಳು
ನನ್ನ ನೋಡಿ
ನಗುತಿದೆ;
ದುಃಖ ಮರೆಯಲು
ನಾನೂ..! 

೩.
‘ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?’
ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ.
‘ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!’
ಉತ್ತರಿಸಿತು ಕಣ್ಣು.

೪.
ಎಲೆಗಳು ಪರಸ್ಪರ ತಾಕದಿರಲು
ದೂರ ದೂರದಲಿ ನೆಟ್ಟ
ಮರದ ಬೇರುಗಳು
ಭೂಗರ್ಭದಲಿ ಬಿಗಿದಪ್ಪಿದವು..!


ಹೇಗಿದೆ ಹೇಳಿ

2 thoughts on “ಹುಸೇನಿ ಪದ್ಯಗಳು – 13

 1. ಪ್ರತಿಯೊಂದು ಹನಿಗಳೂ ಕಾಡುತ್ತವೆ ಹುಸ್ಸೈನಣ್ಣ. ನಿಮ್ಮೊಳಗಿನ ಕವಿಮನದ ಕ್ರಿಯಾಶೀಲತೆಯ ತೂಕಕ್ಕೆ ತೂಗುವ ಹನಿಗಳಿವು.

  ಎಲೆಗಳು ಪರಸ್ಪರ ತಾಕದಿರಲು
  ದೂರ ದೂರದಲಿ ನೆಟ್ಟ
  ಮರದ ಬೇರುಗಳು
  ಭೂಗರ್ಭದಲಿ ಬಿಗಿದಪ್ಪಿದವು..!
  ಈ ಹನಿ ಬಹಳ ಇಷ್ಟವಾಯ್ತು.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s