ಕಾಡುವ ಹನಿಗಳು · ನೀನೆಂದರೆ.. · ನೆನಪಿನ ಹನಿ · ಮನಸಿನ ಹಾ(ಪಾ)ಡು

ನೀನೆಂದರೆ..


shadow and girl

ನೀನೆಂದರೆ..

ಕಾದು ಕಾವಲಿಯಾದ ಮನಸಿಗೆ
ಹೊಂಗೆ ತಂಪು
ಇರುಳ ಕರಾಳತೆಯಲ್ಲಿ
ಕಳೆದು ಹೋಗುವ
ಕನಸು..!

ನೀನೆಂದರೆ..

ಕಲ್ಪನೆ, ಪರಿಕಲ್ಪನೆ
ಬದಲಾವಣೆ!
ನಾಳೆಯ ನಿರೀಕ್ಷೆ,
ಪ್ರತೀಕ್ಷೆ !

ನೀನೆಂದರೆ..

ಮುಂಗುರುಳು ಮುಂಜಾನೆಯ
ಮಂಜ ಹನಿ,
ಕೇಳಿದಷ್ಟೂ ಕೇಳಬೇಕೆನಿಸುವ
ಕಹಾನಿ!

ನೀನೆಂದರೆ..

ನನ್ನೊಳಗಿನ ತುಮುಲ,
ಹೊಯ್ದಾಟ!
ತನ್ನ ಅಸ್ತಿತ್ವಕ್ಕಾಗಿ
ಮಾತಿನ ಮೊರೆ ಹೋದ
ಪರಾವಲಂಬಿ ಮೌನ !

ನೀನೆಂದರೆ..

ಭರವಸೆಯ ಆಲಿಂಗನ,
ಕಣ್ಣೋಟದ
ಸಿಹಿ ಚುಂಬನ…!
ಒಂಟಿ ಕತ್ತಲ ಏಕಾಂಗಿತನ..

ಮತ್ತೆ ನನ್ನೀ
ಜೀವನ..!


ಹೇಗಿದೆ ಹೇಳಿ

45 thoughts on “ನೀನೆಂದರೆ..

 1. ಹಾಗಿದ್ದರೆ ನಿಮ್ಮೊಳಗಿನ ಎಲ್ಲವೂ “ಅವಳೇ..” ಯೇನು..??
  ಭಾವಗಳನ್ನೆಲ್ಲಾ ಎರಕ ಹೊಯ್ದು ಮೂಡಿಸಿದಂತಿದೆ ಕವನ.. ಸೂಪರ್…

  Like

  1. ಧನ್ಯವಾದಗಳು ಸುಷ್ಮಾ… ಎಲ್ಲವೂ ಎಲ್ಲೆಲ್ಲೂ ಅವಳೇ ಆಗಿರುವುದು ಕೂಡ ಚೆನ್ನ ಆಲ್ವಾ …

   Like

 2. ಕಲ್ಪನೆ, ಪರಿಕಲ್ಪನೆ
  ಬದಲಾವಣೆ!
  ನಾಳೆಯ ನಿರೀಕ್ಷೆ,
  ಪ್ರತೀಕ್ಷೆ !……….
  ಹಾಗೆ ನಿಮ್ಮ ಬರಹಗಳೆ೦ದರೂ ನಮ್ಮ ನಿರೀಕ್ಷೆಯೂ ಹೆಚ್ಚುತ್ತಿದೆ ದಿನಗಳೆದಂತೆ. ಚೆನ್ನಾಗಿದೆ ಕವನ 🙂

  Like

  1. ನಿರೀಕ್ಷೆಗಳೇ ಬದುಕಿನ ಪ್ರೇರಕ ಶಕ್ತಿ ಅಲ್ಲವಾ ಗೆಳೆಯಾ … ಪ್ರತಿಕ್ರಿಯೆಗೆ ಧನ್ಯವಾದಗಳು …

   Like

 3. ಪ್ರೇಮದ ಅಮಲು ತಲೆಗೇರಿ, ಪ್ರೇಮದಲೆಗಳಲ್ಲಿ ತೇಲಿ ಹೋದೆ. ಬಹಳ ಭಾವುಕವಾದ ಕವಿತೆ ಹುಸ್ಸೈನಣ್ಣ, ನಿಮ್ಮಿಂದ ಇಂಥದ್ದೊಂದು ನೀಳ್ಗವನ ಓದಿ ಖುಷಿಯಾಯ್ತು. ಪ್ರೇಮದ ಭಾವಗಳು ನಿಮ್ಮ ರಚನೆಗಳಲ್ಲಿ ನವೀನತೆಯನ್ನು ಪಡೆದು ಹರಡಿಕೊಳ್ಳುತ್ತವೆ. 🙂

  Like

 4. ನಿಮ್ಮ ಕವನಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಸರ್ ನನಗೆ ಎಷ್ಟು ಹಿಡಿಸ್ತು ಅಂತಾ ಹೆಳೋಕೆ ಪದಗಳು ಸಿಗುತ್ತಿಲ್ಲ
  ಧನ್ಯವಾದಗಳು.

  Like

 5. ತುಂಬಾ ಚೆನ್ನಾಗಿದೆ … ಇಷ್ಟವಾಯ್ತು
  ಧನ್ಯವಾದಗಳು…

  Like

 6. ನಿಮ್ಮ ಕವನಗಳು ಓದಿ ಮನಸ್ಸಿಗೆ ಸಮಾಧಾನ ದೊರಿತಿದೆ ಸರ್
  ನಿಮ್ಮಲ್ಲೊಮ್ಮೆ ಮಾತನಾಡಬಹುದೆ? ದಯವಿಟ್ಟು ಕಾಲ್ ಮಾಡಿ 9902056765

  Like

  1. ನನ್ನ ಕವನವು ನಿಮ್ಮ ಮನಸ್ಸಿಗೆ ಸಮಾಧಾನ ಕೊಟ್ಟದ್ದು ತಿಳಿದು ಸಂತೋಷವಾಯ್ತು … ನಿಮ್ಮ ಪ್ರೀತಿಯ ಹಾರೈಕೆಗೆ ಧನ್ಯವಾದಗಲು… ಬರುತ್ತಿರಿ … 🙂

   Like

  1. ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಅಕ್ಕಾ.. ನನ್ನ ಬ್ಲಾಗಿಗೆ ನಿಮಗೆ ತುಂಬು ಮನದ ಸ್ವಾಗತ … ಬಂದು ಪ್ರೋತ್ಸಾಹಿಸುತ್ತಿರಿ 🙂

   Like

 7. Nannaya geleya nee bareda neenendare ninnolage adagida avala sparshadanthide ….
  Heege nininda ninindale ellarigu bareyuva chutuka adbutha.

  Like

 8. ತುಂಬಾ ಚೆಂದದ ಕವನ, ಆಪ್ತವೆನಿಸುವ ಭಾವಗಳು ಹೀಗೆ ಬರೆಯುತ್ತಿರಿ

  Like

 9. ಅದ್ಭುತ …ನಿಮ್ಮ. ಕಾವ್ಯ …ನಾನು ನನ್ನ ಗೆಳಯರಿಗೆ ನಿಮ್ಮ ಕವಿತೆಗಳನು WhatsApp ಮುಲಕ. ಕಳುಹಿಸಿದೆ…
  ನಿಮ್ಮ ಕಾವ್ಯ ಸಿಂಚನ ಈಗೆ ಮುಂದುವರಿಯಲಿ…

  Like

Leave a Reply to Hussain(Nenapinasanchi ) Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s