ಕಟ್ ಕತೆಗಳು

ಕಟ್ ‘ ಕತೆಗಳು


1. “ಇಲ್ಲಿಗೆ ಎಲ್ಲ ಮುಗಿಯಿತು. ಇನ್ಯಾವತ್ತೂ ನಿನ್ನ ವಿಷಯಕ್ಕೆ ಬರಲ್ಲ .. ಇನ್ಯಾವತ್ತೂ ನಿನ್ನ ಮುಖ ನೋಡಲ್ಲ” ಅಂತ ಹೇಳಿ ರೋಷದಿಂದ ಹೊರಟು ಬಂದ ಅವನು ಕಣ್ಣುಗಳಲ್ಲಿ ಅವಳನ್ನು ತುಂಬಿಕೊಂಡಿದ್ದನು.

2. ಆ ಹುಡುಗನಿಗೆ ತಾನು ಪರೀಕ್ಷೆಯಲ್ಲಿ ಡುಮ್ಕಿ ಹೊಡೆದ ಬೇಜಾರು ಪಕ್ಕದ ಮನೆಯ ವಿದ್ಯಾಳಿಗೆ ಡಿಸ್ಟಿಂಕ್ಷನ್ ಬಂದಿದೆ ಅಂತ ಕೇಳಿದಾಗ ದೂರವಾಗಿತ್ತು.

3. ಮರಿ ಮೀನುಗಳು ತಾಯಲ್ಲಿ ಕೇಳಿತು, “ನಾನು ನೀರಲ್ಲೇ ಏಕೆ ಬದುಕಬೇಕು..? ನೆಲದ ಮೇಲೆ ಬದುಕಲಾಗದೆ..?” ತಾಯಿ ಮೀನು ಹೇಳಿತು.. ಮರೀ.. ನೀರು FISHಗೆ.. ನೆಲ “SELFISH”ಗೆ..!

4. ಹಣ, ಅಂತಸ್ತಿನ ಹಿಂದೆ ಬಿದ್ದ ಅವನು ವರ್ಷಗಳ ನಂತರ ವಿದೇಶದಿಂದ ಮನೆಗೆ ಬಂದಿದ್ದ. ಹಾಲುಗಲ್ಲದ ತನ್ನ ಮಗು ಅವನನ್ನು ನೋಡಿದವನೇ ತೊದಲುತ್ತ ಪ್ರಶ್ನಿಸಿದ, “ಇದು ಯಾರಮ್ಮಾ ..? ”

5. ದಿನಾ ದೇವಸ್ಥಾನಕ್ಕೆ ಹೋಗಿ ಊರವರಿಂದ “ತುಂಬಾ ಒಳ್ಳೆಯ ಹುಡುಗಿ” ಅಂತ ಸರ್ಟಿಫಿಕೇಟ್ ಪಡೆದ ವಿಶಾಲಮ್ಮನ ಮಗಳು ಮದುವೆಯ ಮುಂಚಿನ ರಾತ್ರಿ ಪೂಜಾರಿ ಜೊತೆ ಓಡಿಹೊದಳು.

6. ಎಂದೂ ತಮ್ಮೊಳಗೆ ನಡೆಯುತ್ತಿದ್ದ ಕಲಹದಿಂದ ಬೇಸತ್ತು ಅವರು ಡೈವೋರ್ಸ್ ಪಡೆದಿದ್ದರು. ಈಗ ಬೋರ್ಡಿಂಗ್ ಸ್ಕೂಲಲ್ಲಿ ಕಲಿಯುತ್ತಿರುವ ಮಗನ ಬೇಸಿಗೆ ರಜೆಗೆ ಯಾರ ಮನೆಯಲ್ಲಿರಬೇಕೆಂಬ ವಿಚಾರದಲ್ಲಿ ಮತ್ತೆ ಕಲಹ ನಡೆಯುತ್ತಾ ಇದೆ.

7. ಕೊನೆಯ ಬಾರಿಗೆ ನಂಗೆ “ಐ ಲವ್ ಯೂ” ಅಂದದ್ದು ಯಾವಾಗ? ಅಂತ ಅವಳು ಕೇಳಿದ್ದೆ ತಡ, ಆತ ಎಂದಿನಂತೆ ಕಿಸೆಯಲ್ಲಿದ್ದ ಚಾಕೊಲೇಟನ್ನು ಅವಳಿಗೆ ಕೊಟ್ಟ..ಅವಳು ಅದನ್ನು ಚಪ್ಪರಿಸುತ್ತಾ ನುಸು ನಾಚಿಕೊಂಡಳು!!!!!!

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ


Leave a Comment

ಕನ್ನಡ ಬ್ಲಾಗಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ

9 thoughts on “ಕಟ್ ‘ ಕತೆಗಳು

  1. ಚಿಕ್ಕ ಚಿಕ್ಕ ಸಾಲುಗಳಲ್ಲೇ ದೊಡ್ದರ್ಥವನ್ನು ಕಟ್ಟಿ ಕೊಡಬಹುದು ಎಂಬುದನ್ನು ನೀವು ನಿರೂಪಿಸಿ ಬಿಟ್ಟಿರಿ..
    ಎಲ್ಲವೂ ಸೂಪರ್..
    ಸ್ಪೆಷಲಿ, ” ಕೊನೆಯ ಬಾರಿಗೆ ನಂಗೆ “ಐ ಲವ್ ಯೂ” ಅಂದದ್ದು ಯಾವಾಗ? ಅಂತ ಅವಳು ಕೇಳಿದ್ದೆ ತಡ, ಆತ ಎಂದಿನಂತೆ ಕಿಸೆಯಲ್ಲಿದ್ದ ಚಾಕೊಲೇಟನ್ನು ಅವಳಿಗೆ ಕೊಟ್ಟ..ಅವಳು ಅದನ್ನು ಚಪ್ಪರಿಸುತ್ತಾ ನುಸು ನಾಚಿಕೊಂಡಳು!!!!!! ”

    Like

  2. helalu cut kathegaku aadare that antha yochanega barada nithya sathyatheya aalada mathugalu…….nanna nechina e padagalu…………

    anu

    Like

Leave a reply to anuranjan Cancel reply